ಎಲ್ಲರಿಗೂ ಸುಪ್ರಭಾತದ ಶುಭಮಂಗಲಾಶಯಗಳು.
30. 03. 2025, ಯುಗಾದಿ ಹಬ್ಬಾಚರಣೆ, ಯುಗಾದಿ ಸಂಭ್ರಮ. ನೂತನ “ವಿಶ್ವವಸು” ನಾಮ ಸಂವತ್ಸರವನ್ನು ಬರಮಾಡಿಕೊಳ್ಳುವುದು.
ದಿನಾಂಕ 30. 03. 2025, ಭಾನುವಾರ – ಮಠದಲ್ಲಿ ಯುಗಾದಿಪೂಜೆ ಮತ್ತು ಪಂಚಾಂಗಶ್ರವಣ ಕಾರ್ಯಕ್ರಮ
- ಬೆಳಿಗ್ಗೆ 06.00 ಗಂಟೆಗೆ – ಶ್ರೀ ಶ್ರೀಗಳವರಿಂದ ಖುದ್ದಾಗಿ ಹಿರೇಮಠದ ಕರ್ತೃಸನ್ನಿಧಾನ ಶ್ರೀ ನಂದೀಶ್ವರಸಹಿತ ಮಲ್ಲಿಕಾರ್ಜುನ ಮಹಾಸ್ವಾಮಿಗೆ ರುದ್ರಾಭಿಷೇಕ, ಪೂಜೆ, ಅಷ್ಟೋತ್ತರ ಮತ್ತು ಮಹಾಮಂಗಳಾರತಿ
- ಬೆಳಿಗ್ಗೆ 08.00ರಿಂದ 09.00 – ಶ್ರೀ ಶ್ರೀಗಳವರ ಇಷ್ಟಲಿಂಗಪೂಜೆ
- ಬೆಳಿಗ್ಗೆ 9.00ರಿಂದ 12. 30ರವರೆಗೆ – ಶ್ರೀ ಶ್ರೀಗಳವರಿಂದ ಭಕ್ತಾದಿಗಳಿಗೆ ಬೇವು, ಬೆಲ್ಲ ಪ್ರದಾನ ಮತ್ತು ಆಶೀರ್ವಾದ
- ಸಂಜೆ 05.00ಕ್ಕೆ ಹಿರೇಮಠದಲ್ಲಿ ಯುಗಾದಿ ಕವಿಗೋಷ್ಠಿ ಮತ್ತು ಕವಿಸನ್ಮಾನ. ಕವಿಗಳು ಯುಗಾದಿ ಕುರಿತಾದ ಕವನಗಳನ್ನು ವಾಚನ ಮಾಡುತ್ತಾರೆ. ಜೊತೆಯಲ್ಲಿ ಲಘು ಸಂಗೀತ ಕಾರ್ಯಕ್ರಮ.
- ಸಂಜೆ 6.00ಕ್ಕೆ ಮಠದಲ್ಲಿ ಸರಸ್ವತಿಪೂಜೆ ಮತ್ತು ನೂತನ ಪಂಚಾಂಗಪೂಜೆ, ಪಂಚಾಂಗ ಶ್ರವಣ, ಶಾಸ್ತ್ರಿಗಳು ಪಂಚಾಂಗಶ್ರವಣ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ನಂತರ ಶ್ರೀ ಶ್ರೀಗಳವರಿಂದ ನೂತನ ಸಂವತ್ಸರದ ಸಂದರ್ಭದಲ್ಲಿ ವಿಶೇಷ ಆಶೀರ್ವಚನ ಮತ್ತು ಧರ್ಮಸಂದೇಶ. ಆಗಮಿಸಿದ ಭಕ್ತಾದಿಗಳಿಗೆ ಶ್ರೀ ಶ್ರೀಗಳ ಅಮೃತಹಸ್ತದಿಂದ ಬೇವು, ಬೆಲ್ಲ ಪ್ರಸಾದ ಪ್ರದಾನ
ಸಮಾರಂಭದ ನಂತರ ಭಕ್ತಾದಿಗಳಿಗೆಲ್ಲ ಕ್ಷೀರದಾಸೋಹ
ನೂತನ ಸಂವತ್ಸರವು ಎಲ್ಲರ ಬಾಳಲ್ಲೂ ಕಂಪು, ಇಂಪು, ಪೆಂಪುಗಳನ್ನು ತುಂಬಲಿ.
ಹಿರೇಮಠ ಭಕ್ತವೃಂದ
ಮತ್ತು ಹಿರೇಮಠದ ವ್ಯವಸ್ಥಾಪಕರು
ಸುಕ್ಷೇತ್ರ ಹಿರೇಮಠ, ಚಿಕ್ಕಪೇಟೆ, ತುಮಕೂರು
Categories: