ಎಲ್ಲರಿಗೂ ಸುಪ್ರಭಾತದ ಶುಭಮಂಗಲಾಶಯಗಳು.
ಪ್ರತಿ ಅಮಾವಾಸ್ಯೆಯಂದು ಹಿರೇಮಠದಲ್ಲಿ ಅಮಾವಾಸ್ಯಾಪೂಜೆ ಮತ್ತು ದಾಸೋಹ ನಡೆಯುವಂತೆ ಪ್ರತಿ ಹುಣ್ಣಿಮೆಯಂದು ತಪೋವನದಲ್ಲಿ ಹುಣ್ಣಿಮೆ ಧ್ಯಾನ, ಸತ್ಸಂಗ ಮತ್ತು ದಾಸೋಹ ನಡೆಯುತ್ತಿದೆ. ತಪೋವನದಲ್ಲಿ ಹುಣ್ಣಿಮೆ ಕಾರ್ಯಕ್ರಮ ಶುರುವಾಗಿ ಎರಡು ತಿಂಗಳಾಯಿತು. ಭಕ್ತಾದಿಗಳು ಚೆನ್ನಾಗಿ ಸ್ಪಂದಿಸುತ್ತಿದ್ದಾರೆ.
:::::::::::::::::::::::::::::::::::::::::::::::::::::::::::::::::::
ವಿಶೇಷವಾಗಿ ಭಕ್ತಾದಿಗಳ ಗಮನಕ್ಕೆ ತರುತ್ತಿದ್ದೇವೆ.
:::::::::::::::::::::::::::::::::::::::::::::::::::::::::::::::::::
2025, ಎಪ್ರಿಲ್ 12 ಶನಿವಾರದಂದು ತಪೋವನದಲ್ಲಿ ಹುಣ್ಣಿಮೆ ಕಾರ್ಯಕ್ರಮವಿದೆ.
ಎಲ್ಲರೂ ಬನ್ನಿ. ತಮ್ಮನ್ನೆಲ್ಲ ಸಮಾರಂಭಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ.
ಅವತ್ತಿನಿಂದಲೇ ಮಕ್ಕಳಿಗಾಗಿ ತಪೋವನದಲ್ಲಿ 14 ದಿನಗಳ ರಾಜ್ಯಮಟ್ಟದ ಸರ್ವಾಂಗಸುಂದರ ಬೇಸಿಗೆ ಶಿಬಿರ ಶುರುವಾಗುತ್ತಿದೆ. ದಿನಾಂಕ 12ರಿಂದ ಎಪ್ರಿಲ್ 25ರವರೆಗೆ.
ಹೆಚ್ಚಿನ ಮಾಹಿತಿಗಾಗಿ ಹಿರೇಮಠವನ್ನು ಸಂಪರ್ಕಿಸಿ.
ಹಿರೇಮಠ ಭಕ್ತವೃಂದ
ಮತ್ತು ಹಿರೇಮಠದ ವ್ಯವಸ್ಥಾಪಕರು
ಸುಕ್ಷೇತ್ರ ಹಿರೇಮಠ, ಚಿಕ್ಕಪೇಟೆ, ತುಮಕೂರು